ನವದೆಹಲಿ: ಕೊರೊನಾ ಸ್ಫೋಟದ ಹಿನ್ನೆಲೆ ಮತ್ತೆ ವಲಸೆ ಕಾರ್ಮಿಕರ ಗುಳೆ ಹೆಚ್ಚಾಗುವ ಸಾಧ್ಯತೆಗಳಿವೆ. ಹಾಗಾಗಿ ಕೇಂದ್ರ ಹೆಚ್ಚುವರಿ ೩೩೦ ರೈಲುಗಳು ಬಿಡಲು ತೀರ್ಮಾನಿಸಿದೆ.
ರೈಲುಗಳಿಗೆ ಹೆಚ್ಚು ಬೇಡಿಕೆ ಬಂದ ಹಿನ್ನೆಲೆ ಗೋರಖ್‌ಪುರ, ಪಾಟ್ನಾ, ಮುಜಾಫರ್ ನಗರ, ವಾರಣಾಸಿ, ಗುವಾಹಟಿ, ಅಲಹಬಾದ್ ಮತ್ತು ಬೋಕೋರೋಗೆ ನಿಲ್ದಾಣಗಳಿಗೆ ಹೆಚ್ಚಿನ ರೈಲುಗಳು ಓಡಲಿವೆ. ಇದರ ಜೊತೆಗೆ ಪ್ರತಿದಿನದ ೬೭೪ ರೈಲುಗಳ ಸಂಚಾರವನ್ನ ಮತ್ತಷ್ಟು ವೇಗಗೊಳಿಸಲಾಗುತ್ತಿದೆ. ೬೭೪ ರೈಲುಗಳ ಸೇವೆಯನ್ನ ದ್ವಿಗುಣಗೊಳಿಸುವ ಲೆಕ್ಕಾಚಾರದಲ್ಲಿ ಸರ್ಕಾರ ಇದೆ.

ಕೋವಿಡ್ ಪಸರಿಸುವಕೆ ಹೆಚ್ಚಾಗಿದ್ದರಿಂದ ರಾಜ್ಯಗಳು ಲಾಕ್‌ಡೌನ್ ಹೆಸರು ಹೇಳದೇ ಕಠಿಣ ನಿಯಮಗಳ ಜಾರಿಗೆ ತರುತ್ತಿದೆ. ಹಾಗಾಗಿ ದಿನದ ದುಡಿಮೆ ನಂಬಿದ ಜನ ಮತ್ತೆ ತವರು ಸೇರಿಕೊಳ್ಳವ ತವಕದಲ್ಲಿದ್ದಾರೆ. ಅಂತರ್ ರಾಜ್ಯ ಕಾರ್ಮಿಕರು ಹಿತಾಸಕ್ತಿಗಾಗಿ ಹೆಚ್ಚುವರಿ ರೈಲು ಓಡಿಸಲು ಸರ್ಕಾರ ಮುಂದಾಗಿದೆ.
ಸದ್ಯ ಶೇ.೭೦ ರಷ್ಟು ರೈಲುಗಳು ಸೇವೆ ನೀಡುತ್ತಿವೆ, ಹೆಚ್ಚು ಬೇಡಿಕೆ ಬಂದ ಭಾಗಗಳಿಗೆ ರೈಲು ಸೇವೆಯನ್ನ ಒದಗಿಸಲಾಗುತ್ತಿದೆ. ಕೊರೊನಾ ನಡುವೆಯೂ ಪ್ರತಿದಿನ ೧,೫೮೪ ರೈಲುಗಳು ಸಂಚರಿಸುತ್ತಿವೆ. ೫,೩೮೪ ಸಬ್ ಅರ್ಬನ್ ಸರ್ವಿಸ್ ರೈಲುಗಳ ಸಹ ಇವೆ. ಪ್ರಯಾಣಿಕರ ಸಂಚಾರ ಕಡಿಮೆ ಇರೊ ಭಾಗಗಳಲ್ಲಿ ರೈಲುಗಳ ಸೇವೆಯನ್ನ ಸ್ಥಗಿತಗೊಳಿಸಲಾಗ್ತಿದೆ. ಕಾರ್ಮಿಕರ ವಲಸೆಯಿಂದಾಗಿ ಸದ್ಯ ಶೇ.೭೦ಕ್ಕೂ ಹೆಚ್ಚು ರೈಲುಗಳು ಸಂಚಾರದಲ್ಲಿವೆ ಎಂದು ರೈಲ್ವೇ ಬೋರ್ಡ್ ಚೇರ್‌ಮೆನ್ ಸುನಿತಾ ಶರ್ಮಾ ಮಾಹಿತಿ ನೀಡಿದ್ದಾರೆ.