ಬೆಂಗಳೂರು : ಕೊರೊನಾ ಸೋಂಕು ತಗುಲಿ ಹಿರಿಯ ನಿರ್ಮಾಪಕ, ನಟಿ ಮಾಲಾಶ್ರೀ ಪತಿ ರಾಮು ಎಂ.ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ನಿಧನವಾಗಿದ್ದಾರೆ. ಇಂದು ಸಂಜೆ 7:30ಕ್ಕೆ ಅವರು ಕೊನೆ ಉಸಿರೆಳಿದ್ದಾರೆ ಎಂದು ಕುಟುಂಬದ ಮೂಲಗಳು ಹೇಳಿವೆ.

ಕೊರೊನಾ ಗುಣಲಕ್ಷಣಗಳಿಂದ ಬಳಲುತ್ತಿದ್ದ ರಾಮು ಅವರ ಶ್ವಾಸಕೋಶಗಳ ಸೋಂಕು ತೀವ್ರವಾಗಿ ತಗುಲಿತ್ತು ಇದರಿಂದ ಉಸಿರಾಟದ ತೊಂದರೆ ಯಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗಿದೆ ಸಾವನ್ನಪ್ಪಿದ್ದಾರೆ. ಆಸ್ಪತ್ರೆಗೆ ಬಂದಾಗ ಉಸಿರಾಟದ ತೊಂದರೆ ಹೊಟ್ಟೆ ನೋವು ಫುಡ್ ಪಾಯಿಸನ್ ನಿಂದ ಬಳಲುತ್ತಿದ್ದರು ಎನ್ನಲಾಗಿದೆ.

AK 47, ಲಾಕಪ್ ಡೆತ್, ಕಲಾಸಿಪಾಳ್ಯ, ಸಿಬಿಐ ದುರ್ಗಾ ಸಿನಿಮಾ ನಿರ್ಮಿಸಿದ್ದ ರಾಮು 30 ಕ್ಕೂ ಹೆಚ್ಚು ಚಿತ್ರಗಳನ್ನ ನಿರ್ಮಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಕೋಟಿ ರಾಮು ಖ್ಯಾತರಾಗಿದ್ದರು.