ನವದೆಹಲಿ : ಕೊರೊನಾ ನಿಯಂತ್ರಣಕ್ಕಾಗಿ ಸಂಶೋಧಿಸಲಾಗಿರುವ ಲಸಿಕೆ ಪಡೆಯಲು ಅಮೇರಿಕಾದ ಜನರು ಹಿಂದೇಟು ಹಾಕುತ್ತಿದ್ದಾರೆ ಎಂದು ವರದಿಯಾಗಿದ್ದು, ಅಡ್ಡ ಪರಿಣಾಮಗಳ ಕಾರಣ ಎರಡನೇ ಡೋಸ್ ಪಡೆಯಲು ನಿರಾಕರಿಸಿದ್ದಾರೆ.
ಅಮೇರಿಕಾದ ಮಾಧ್ಯಮಗಳು ವರದಿ ಪ್ರಕಾರ, ಅಮೇರಿಕಾದಲ್ಲಿ ಎರಡನೇ ಡೋಸ್ ಪಡೆಯಲು 50 ಲಕ್ಷ ಮಂದಿ ನಿರಾಕರಿಸಿದ್ದಾರೆ. ಅಂದರೆ ಮೊದಲ ಡೋಸ್ ಪಡೆದ ಒಟ್ಟು ಜನರಲ್ಲಿ 8%ರಷ್ಟು ಜನರು ಎರಡನೇ ಹಂತದ ವ್ಯಾಕ್ಸಿನೇಷನ್‌ನಿಂದ ದೂರ ಉಳಿದಿದ್ದಾರೆ ಎನ್ನಲಾಗಿದೆ.

ಈ ಪೈಕಿ ಹಲವರನ್ನು ಮಾತನಾಡಿಸುವ ಪ್ರಯತ್ನಗಳಾಗಿದ್ದು ಜನರು ವ್ಯಾಕ್ಸಿನ್ ಪಡೆದ ಬಳಿಕ ಕಾಣಿಸಿಕೊಂಡ ಅಡ್ಡ ಪರಿಣಾಮಗಳಿಂದ ಬೆದರಿದ್ದಾರೆ ಮತ್ತು ಕೊರೊನಾ ನಿಯಂತ್ರಣಕ್ಕೆ ಒಂದೇ ಡೋಸ್ ಸಾಕು ಅನ್ನೊ ಅಭಿಪ್ರಾಯ ಬಂದಿದ್ದಾರೆ ಎಂದು ಉಲ್ಲೇಖಿಸಲಾಗಿದೆ.
ಫಿಜರ್ ಮತ್ತು ಮಾಡರ್ನಾ ಲಸಿಕೆಗಳನ್ನು ಸದ್ಯ ಅಮೇರಿಕಾದಲ್ಲಿ ನೀಡಲಾಗುತ್ತಿದ್ದು ಇವುಗಳ ಬೇಡಿಕೆ ಕಡಿಮೆಯಾಗಿದೆ. ಜನರು ವ್ಯಾಕ್ಸಿನ್ ಪಡೆಯದ ಪರಿಣಾಮ ವ್ಯಾಕ್ಸಿನೇಷನ್ ಅಭಿಯಾನಕ್ಕೆ ಹಿನ್ನಡೆಯಾಗಿದ್ದು ರಾಜ್ಯಗಳ ಬೇಡಿಕೆಯನ್ನು ನಿಲ್ಲಿಸುತ್ತಿವೆ ಎಂದು ವರದಿಯಾಗಿದೆ.