ನವದೆಹಲಿ : ರಾಜ್ಯದಲ್ಲಿ ನಿಯಂತ್ರಣಕ್ಕೆ ಬಾರದ ಕೊರೊನಾ ವೈರಸ್ ಮತ್ತು ಆಸ್ಪತ್ರೆಗಳಲ್ಲಿ ಸೃಷ್ಟಿಯಾಗಿರುವ ಮೆಡಿಕಲ್ ಆಕ್ಸಿಜನ್ ಕೊರತೆ ಕಾರಣದಿಂದ ದೆಹಲಿಯಲ್ಲಿ ಲಾಕ್ಡೌನ್ ವಿಸ್ತರಣೆ ಮಾಡಲಾಗುತ್ತಿದೆ ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ನಾಳೆ ಬೆಳಗ್ಗೆ 5 ಗಂಟೆಗೆ ಲಾಕ್ಡೌನ್ ಅಂತ್ಯವಾಗುತ್ತಿರುವ ಹಿನ್ನಲೆ ಇಂದು ಸುದ್ದಿಗೋಷ್ಟಿ ನಡೆಸಿದ ಅವರು, ಮುಂದಿನ ಸೋಮವಾರ ಬೆಳಗ್ಗೆ 5 ಗಂಟೆ ವರೆಗೂ ಲಾಕ್ಡೌನ್ ವಿಸ್ತರಿಸಲಾಗುವುದು ಎಂದು ಘೋಷಿಸಿದ್ದಾರೆ.
We had imposed a 6-day lockdown in Delhi. The lockdown is being extended to next Monday till 5 am: Delhi CM Arvind Kejriwal #COVID19 pic.twitter.com/s1eHgZmaHN
— ANI (@ANI) April 25, 2021
ದೆಹಲಿಯಲ್ಲಿ ಲಾಕ್ಡೌನ್ ಬಳಿಕವೂ ನಿರೀಕ್ಷಿತ ಪ್ರಮಾಣದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬಂದಿಲ್ಲ ಮತ್ತಷ್ಟು ಪ್ರಮಾಣದಲ್ಲಿ ಸೊಂಕು ನಿಯಂತ್ರಣಕ್ಕೆ ಬರಬೇಕಿದ್ದು, ಈ ನಡುವೆ ಮೆಡಿಕಲ್ ಆಕ್ಸಿಜನ್ ಕೊರತೆ ಸೃಷ್ಟಿಯಾಗಿದೆ.
ಆಕ್ಸಿಜನ್ ಕೊರತೆ ನೀಗಿಸಲು ಆಮ್ಲಜನಕದ ತಯಾರಕರು, ಪೂರೈಕೆದಾರರು ಮತ್ತು ಆಸ್ಪತ್ರೆಗಳು ನಡುವೆ ಸಂಪರ್ಕ ಹೊಂದುವ ಪೊರ್ಟಲ್ ಆರಂಭಿಸಲಾಗಿದೆ. ಇದು ಪ್ರತಿ ಎರಡು ಗಂಟೆಗಳಿಗೊಮ್ಮೆ ನವೀಕರಿಣಗೊಳ್ಳುತ್ತದೆ ಆದ್ಯತೆ ಅನುಸಾರ ಆಸ್ಪತ್ರೆಗಳಿಗೆ ಆಕ್ಸಿಜನ್ ಒದಗಿಸುವ ಪ್ರಯತ್ನ ಮಾಡಲಾಗುತ್ತಿದೆ.
We have started a portal that will be updated every two hours by oxygen manufacturers, suppliers and hospitals for better management of oxygen supply. The Central and State teams are working together: Delhi CM Arvind Kejriwal pic.twitter.com/uDpvdY9M4W
— ANI (@ANI) April 25, 2021
ಕೇಂದ್ರ ಸರ್ಕಾರದಿಂದ ಬೇಡಿಕೆ ಅನುಸಾರ ಆಕ್ಸಿಜನ್ ಪೂರೈಕೆಯಾಗುತ್ತಿಲ್ಲ ಆದ್ಯಾಗೂ ಕೇಂದ್ರ ಮತ್ತು ರಾಜ್ಯ ತಂಡಗಳು ಒಟ್ಟಾಗಿ ಆಕ್ಸಿಜನ್ ಕೊರತೆ ಸರಿದೂಗಿಸಲಾಗುತ್ತಿದೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.