ಮಹಾರಾಷ್ಟ್ರ : ದೇಶದ್ಯಾಂತ ಸೃಷ್ಟಿಯಾಗಿರುವ ಆಕ್ಸಿಜನ್ ಸಮಸ್ಯೆ ಕುರಿತು ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್ ವಿರುದ್ಧ ಶಿವಸೇನೆ ಕಿಡಿಕಾರಿದೆ. ದೇಶದಲ್ಲಿ ಚುನಾವಣಾ ರ್ಯಾಲಿಗಳು ಮತ್ತು ಹರಿದ್ವಾರದಲ್ಲಿ ಮೇಳ ಏರ್ಪಟ್ಟಾಗ ಸುಪ್ರೀಂಕೋರ್ಟ್ ಮೌನವಾಗಿದಿದ್ದೇಕೆ ಎಂದು ಪ್ರಶ್ನಿಸಿದೆ.
ತನ್ನ ಮುಖವಾಣಿ ಸಾಮ್ನಾ ದಿನ ಪತ್ರಿಕೆಯ ಸಂಪಾದಕೀಯದಲ್ಲಿ ಈ ಬಗ್ಗೆ ಬರೆದಿರುವ ಶಿವಸೇನೆ, ಸುಪ್ರೀಂಕೋರ್ಟ್ ಕೊರೋನಾ ಪರಿಸ್ಥಿತಿ ಬಗ್ಗೆ ಈಗ ವಿಚಾರಣೆ ಮಾಡುತ್ತಿದೆ ಈ ಕೆಲಸ ಮೊದಲೆ ಮಾಡಬೇಕಿತ್ತು ಎಂದು ಅಭಿಪ್ರಾಯಪಟ್ಟಿದೆ.

ಮೋದಿ, ಅಮಿತ್ ಶಾ ಮತ್ತಿತರರು ಕೊರೊನಾ ಸಂಕಷ್ಟದಲ್ಲಿ ಪಶ್ಚಿಮ ಬಂಗಾಳ, ಅಸ್ಸಾಂ, ಕೇರಳ, ತಮಿಳುನಾಡು, ಪುದುಚೇರಿಯಲ್ಲಿ ಚುನಾವಣಾ ರ್‍ಯಾಲಿಗಳನ್ನು ನಡೆಸುವಾಗ ಸುಪ್ರೀಂಕೋರ್ಟ್ ಸುಮ್ಮನಿತ್ತು, ಲಕ್ಷಾಂತರ ಜನರು ಭಾಗಿಯಾಗಿ ಹರಿದ್ವಾರದಲ್ಲಿ ಕುಂಭಮೇಳ ನಡೆಸಿದಾಗಲೂ ಮೌನವಾಗಿತ್ತು ಇದೇಲ್ಲವೂ ಆದ ಬಳಿಕ ವಿಚಾರಣೆ ನಡೆಸುತ್ತಿರುವುದು ವ್ಯರ್ಥ ಇದೇಲ್ಲಕ್ಕೂ ಮೊದಲೇ ಸುಪ್ರೀಂ ಕೋರ್ಟ್ ಮಧ್ಯಪ್ರವೇಶ ಮಾಡಿದ್ದರೇ ಇಷ್ಟು ದೊಡ್ಡ ಪ್ರಮಾಣದ ಸಂಕಷ್ಟ ಎದುರಾಗುತ್ತಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದೆ.