ಬೆಂಗಳೂರು : ರಾಜ್ಯದಲ್ಲಿ ಇಂದು ಕೊರೋನಾ ಮಹಾಸ್ಫೋಟವಾಗಿದ್ದು, ಒಂದೇ ದಿನ 29,438 ಮಂದಿಯಲ್ಲಿ ಸೋಂಕು ಕಾಣಿಸಿಕೊಳ್ಳುವ ಮೂಲಕ ಹೊಸ ದಾಖಲೆ ಬರೆದಿದೆ. ಮೂವತ್ತು ಸಾವಿರದ ಗಡಿಯಲ್ಲಿರುವ ಡೆಡಿ ವೈರಸ್ ಇಂದು ಒಂದೇ ದಿನ 208 ಜನರನ್ನು ಬಲಿ ಪಡೆದುಕೊಂಡಿದೆ

ಎಂದಿನಂತೆ ಬೆಂಗಳೂರಿನಲ್ಲಿ 17, 342 ಕೇಸ್ ದಾಖಲಾಗಿದ್ದು ಇದೇ ಮೊದಲ ಬಾರಿ ಇಷ್ಟು ಪ್ರಮಾಣದ ಸೋಂಕಿತರು ಒಂದೇ ದಿನ ಪತ್ತೆಯಾಗಿದ್ದಾರೆ. ಇನ್ನು ಬೆಂಗಳೂರು ಒಂದರಲ್ಲೆ 149 ಮಂದಿ ಸಾವನ್ನಪ್ಪಿದ್ದಾರೆ.
ಜಿಲ್ಲೆಗಳ ಪೈಕಿ ತುಮಕೂರಿನಲ್ಲಿ 1559, ಬೆಂಗಳೂರು ಗ್ರಾಮಾಂತರ 684 ಮಂಡ್ಯ 688, ಮೈಸೂರು 536, ಹಾಸನ 823 ಮಂದಿಗೆ ಸೋಂಕು ತಗುಲಿದ್ದು ರಾಜ್ಯದಲ್ಲಿ ಐಸಿಯು ಪೇಷೆಂಟ್‌ಗಳ ಸಂಖ್ಯೆ 1280 ಕ್ಕೆ ಏರಿಕೆಯಾಗಿದೆ.

ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 13,04,397ಕ್ಕೆ ಏರಿಕೆಯಾಗಿದ್ದು ಸದ್ಯ 23,4483 ಸಕ್ರಿಯ ಪ್ರಕರಣಗಳಿದೆ. ಈವರೆಗೂ ರಾಜ್ಯದಲ್ಲಿ ಒಟ್ಟು 14,283 ಮಂದಿ ಸಾವನ್ನಪ್ಪಿದ್ದು ರಾಜ್ಯದಲ್ಲಿ ಕೊರೊನಾ ಪಾಸಿಟಿವ್ ರೇಟ್ 15.52% ರಷ್ಟಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಹೇಳಿದೆ.