ಮಧ್ಯಪ್ರದೇಶ, ಉತ್ತರಪ್ರದೇಶ, ಅಸ್ಸಾಂ, ಛತ್ತೀಸ್ಗಢದಲ್ಲಿ ಫ್ರೀ ವ್ಯಾಕ್ಸಿನ್ ಘೋಷಣೆ
ಬೆಂಗಳೂರು : ಮೇ 1ರಿಂದ ಮೂರನೇ ಹಂತದ ಲಸಿಕಾ ಅಭಿಯಾನ ಆರಂಭಿಸಿ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ವ್ಯಾಕ್ಸಿನ್ ನೀಡುವಂತೆ ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರ ಸೂಚಿಸಿದ್ದು, ಹಲವು ರಾಜ್ಯ ಸರ್ಕಾರಗಳು ತನ್ನ ಜನರಿಗೆ ಉಚಿತವಾಗಿ ವ್ಯಾಕ್ಸಿನ್ ನೀಡಲು ಮುಂದಾಗಿವೆ.
ಉತ್ತರ ಪ್ರದೇಶ, ಮಧ್ಯಪ್ರದೇಶ, ಅಸ್ಸಾಂ, ಛತ್ತೀಸ್ಗಢದಲ್ಲಿ ಸಂಪೂರ್ಣವಾಗಿ ಉಚಿತ ವ್ಯಾಕ್ಸಿನ್ ನೀಡುವುದಾಗಿ ಆಯಾ ರಾಜ್ಯದ ಸಿಎಂಗಳು ಘೋಷಣೆ ಮಾಡಿದ್ದಾರೆ. ಇನ್ನು ಬಿಹಾರ, ತಮಿಳುನಾಡು, ಮತ್ತು ದೆಹಲಿಯಲ್ಲಿ ಉಚಿತ ವ್ಯಾಕ್ಸಿನ್ ನೀಡುವುದಾಗಿ ಕಳೆದ ವರ್ಷವೇ ಘೋಷಣೆ ಮಾಡಿವೆ.
ಹೀಗಾಗಿ ರಾಜ್ಯದಲ್ಲೂ ಸಿಎಂ ಬಿ.ಎಸ್ ಯಡಿಯೂರಪ್ಪ ಸರ್ಕಾರ ವ್ಯಾಕ್ಸಿನ್ ಉಚಿತವಾಗಿ ನೀಡಲಿದಿಯೇ ಎನ್ನುವ ಕುತೂಹಲ ಮೂಡಿಸಿದೆ. ಉತ್ತರ ಪ್ರದೇಶ, ಮಧ್ಯಪ್ರದೇಶ, ಅಸ್ಸಾಂ, ಬಿಹಾರ ಹೀಗೆ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳೆ ವ್ಯಾಕ್ಸಿನ್ ಉಚಿತ ಎಂದು ಘೋಷಿಸಿರುವ ಹಿನ್ನಲೆ ರಾಜ್ಯದ ಜನರ ನಿರೀಕ್ಷೆಗಳು ಹೆಚ್ಚಾಗಿದೆ.

ವ್ಯಾಕ್ಸಿನ್ ಹಂಚಿಕೆ ಜವಬ್ದಾರಿ ರಾಜ್ಯ ಸರ್ಕಾರಗಳಿಗೆ ವಹಿಸಿರುವ ಕೇಂದ್ರ ಸರ್ಕಾರ, ಇನ್ಮುಂದೆ 50% ಲಸಿಕೆ ಮಾತ್ರ ತನ್ನ ಪಾಲಿನಲ್ಲಿ ನೀಡಲಿದೆ. ಬಾಕಿ 50% ಲಸಿಕೆಯನ್ನು ಆಯಾ ರಾಜ್ಯ ಸರ್ಕಾರಗಳೇ ಖರೀದಿ ಮಾಡಬೇಕಿದೆ. ಇನ್ನು ಖಾಸಗಿ ಆಸ್ಪತ್ರೆಗಳು ವ್ಯಾಕ್ಸಿನ್ ನೀಡಲು ಅವಕಾಶ ನೀಡಿದೆ
ಕೋವಿಶೀಲ್ಡ್ ವ್ಯಾಕ್ಸಿನ್ ಉತ್ಪಾದಿಸುವ ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆ ರಾಜ್ಯ ಸರ್ಕಾರಗಳಿಗೆ ಪ್ರತಿ ಡೋಸ್ ಗೆ ₹400 ಖಾಸಗಿ ಆಸ್ಪತ್ರೆಗಳಿಗೆ ₹600 ದರ ನಿಗಧಿ ಮಾಡಿದ್ದು, ರಾಜ್ಯ ಸರ್ಕಾರ ಈಗಾಗಲೇ ₹400 ಕೋಟಿ ವೆಚ್ಚದಲ್ಲಿ ಒಂದು ಕೋಟಿ ಡೋಸ್ ಖರೀದಿಸಲು ತಿರ್ಮಾನಿಸಿದೆ.
ಒಂದು ವೇಳೆ ಸರ್ಕಾರ ಫ್ರೀ ವ್ಯಾಕ್ಸಿನ್ ಘೋಷಣೆ ಮಾಡದಿದ್ದಲ್ಲಿ ಜನರು ಮೇ 1ರಿಂದ ₹400 – ₹450 ಕೊಟ್ಟು ಸರ್ಕಾರಿ ಆಸ್ಪತ್ರೆಗಳಲ್ಲಿ ವ್ಯಾಕ್ಸಿನ್ ಪಡೆಯಬೇಕು ಖಾಸಗಿ ಆಸ್ಪತ್ರೆಗಳಲ್ಲಿ ವ್ಯಾಕ್ಸಿನ್ ಪಡೆದಲ್ಲಿ ₹600 – ₹800 ಪಾವತಿ ಮಾಡಬೇಕಾಬಹುದು. ಹೀಗಾಗಿ ರಾಜ್ಯ ಸರ್ಕಾರ ಇತರೆ ರಾಜ್ಯಗಳಂತೆ ಸರ್ಕಾರದ ವತಿಯಿಂದ ಉಚಿತ ವ್ಯಾಕ್ಸಿನ್ ನೀಡುತ್ತಾ ಇಲ್ವಾ ಅನ್ನೊದು ಕಾದು ನೋಡಬೇಕಿದೆ.