ನವದೆಹಲಿ : ದೇಶದಲ್ಲಿ ಎರಡನೇ ಅಲೆಯಲ್ಲಿ ಕಾಣಿಸಿಕೊಂಡಿರುವ ಕೊರೊನಾ ಸೋಂಕು ಜನರನ್ನು ಬೆಚ್ಚಿ ಬೀಳಿಸಿದೆ. ನಿತ್ಯ ಎರಡೂವರೆ ಲಕ್ಷಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗುತ್ತಿದ್ದು ಎರಡು ಸಾವಿರಕ್ಕೂ ಅಧಿಕ ಮಂದಿ ಸಾವನ್ನಪ್ಪುತ್ತಿದ್ದಾರೆ. ಇದನ್ನೆಲ್ಲ ನೋಡುತ್ತಿರುವ ಜನರು ಈಗ ವ್ಯಾಕ್ಸಿನ್ ಮತ್ತು ಕೊರೊನಾ ಪರೀಕ್ಷಾ ಕೇಂದ್ರಗಳನ್ನು ಹುಡುಕುತ್ತಿದ್ದಾರೆ
ಇದಕ್ಕಾಗಿ ಗೂಗಲ್ ನಲ್ಲಿ ಹೊಸ ಸೇವೆ ಲಭ್ಯವಾಗಿದ್ದು ಜನರಿಗೆ ಅವರ ಸುತ್ತಲಿನ ಕೊರೊನಾ ಪರೀಕ್ಷಾ ಕೇಂದ್ರಗಳು ಮತ್ತು ವ್ಯಾಕ್ಸಿನ್ ಸೆಂಟರ್ ಗಳನ್ನು ಹುಡುಕಿಕೊಡಲಾಗುತ್ತಿದೆ.

ನಿಮ್ಮ ಆಂಡ್ರಾಯ್ಡ್ ಮೂಬೈಲ್‌ನಲ್ಲಿ ಲೋಕೆಷನ್ ಆನ್ ಮಾಡಿ Covid testing Center Near Me ಅಥಾವ Covid Vaccination Center Near Me ಅಂತಾ ಗೂಗಲ್ ಮ್ಯಾಪ್‌ನಲ್ಲಿ ಸರ್ಚ್ ಮಾಡಿದ್ದಲ್ಲಿ ನಿಮ್ಮಗೆ ನಿಮ್ಮ ಹತ್ತಿರದ ಸರ್ಕಾರಿ ಅಥಾವ ಸರ್ಕಾರದಿಂದ ಅನುಮೋದನೆ ಪಡೆದಿರುವ ಸೆಂಟರ್ ಲಭ್ಯವಾಗಲಿದೆ.
ಕೊರೊನಾ ವ್ಯಾಕ್ಸಿನ್ ಆ್ಯಪ್ ಕೊವೀನ್ ಮತ್ತು ಪರೀಕ್ಷೆ ಆ್ಯಪ್ ಆರೋಗ್ಯ ಸೇತು ಆ್ಯಪ್ ಬಳಸಿಕೊಂಡು ಕೇಂದ್ರ ಆರೋಗ್ಯ ಇಲಾಖೆ ಗೂಗಲ್ ಸಹಕಾರದ ಈ ಕಾರ್ಯ ಆರಂಭಿಸಿದೆ. ಕೆಲವು ಆಸ್ಪತ್ರೆಗಳ ಮೇಲಿನ ಒತ್ತಡಗಳನ್ನು ಕಡಿಮೆ ಮಾಡಲು ಈ ಪ್ರಯತ್ನ ಮಾಡಲಾಗುತ್ತಿದೆ.