ನವದೆಹಲಿ : ದೇಶದಲ್ಲಿ ಪ್ರತಿ ದಿನ ದಾಖಲೆಗಳನ್ನು ಸೃಷ್ಟಿಸುತ್ತಿರುವ ಕೊರೊನಾ ವೈರಸ್ ಭವಿಷ್ಯದಲ್ಲಿ ಮರಣ ಮೃದಂಗ ಬಾರಿಸಲಿದೆ ಎಂದು ಅಮೇರಿಕಾ ಮೂಲದ ಐಎಚ್‌ಎಂಇ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಕೊರೊನಾ ಸೋಂಕು ತೀವ್ರ ಗತಿಯಲ್ಲಿ ಏರುತ್ತಿರುವ ಬಗ್ಗೆ ಅಧ್ಯಯನ ನಡೆಸಿರುವ ವಾಷಿಂಗ್ಟನ್ ವಿಶ್ವವಿದ್ಯಾಲಯದ ಐಎಚ್‌ಎಂಇ ತಜ್ಞರು ಈ ಎಚ್ಚರಿಕೆ ನೀಡಿದ್ದಾರೆ.
ಭಾರತದಲ್ಲಿ ಎಪ್ರೀಲ್‌ನಿಂದ ಅಗಸ್ಟ್ ನಡುವೆ ಸೋಂಕಿನ ಪ್ರಮಾಣ ತೀವ್ರವಾಗಲಿದ್ದು ಸಾವಿರ ಸಂಖ್ಯೆಯೂ ಹೆಚ್ಚಲಿದೆಯಂತೆ. ತಜ್ಞರು ಪ್ರಕಾರ ಈ ನಾಲ್ಕು ತಿಂಗಳಲ್ಲಿ ನಿತ್ಯ ಐದು ಸಾವಿರದಂತೆ ಒಟ್ಟು ಮೂರು ಲಕ್ಷಕ್ಕೂ ಅಧಿಕ ಮಂದಿ ಸಾವನ್ನಪ್ಪಿಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.

ಈಗಾಗಲೇ ಭಾರತದಲ್ಲಿ ಭಾರತದಲ್ಲಿ ನಿತ್ಯ 2500 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪುತ್ತಿದ್ದು ಈ ಸಂಖ್ಯೆ ದುಪ್ಪಟ್ಟಾಗಲಿದೆ. ಸದ್ಯ ದೇಶದಲ್ಲಿ ಒಟ್ಟು 1,89,000 ಮಂದಿ ಸಾವನ್ನಪ್ಪಿದ್ದಾರೆ. ಈ ನಡುವೆ ಮಹಾರಾಷ್ಟ್ರ, ದೆಹಲಿ, ಕರ್ನಾಟಕ, ಉತ್ತರ ಪ್ರದೇಶ ಮತ್ತು ಛತ್ತೀಸ್ಗಢದಲ್ಲಿ ಸಾವಿನ ಪ್ರಮಾಣ ಹೆಚ್ಚಾಗಿದೆ.