ಬೆಂಗಳೂರು : ರಾತ್ರಿ 9ಗಂಟೆಯಿಂದ ವಿಕೇಂಡ್ ಕರ್ಪ್ಯೂ ಜಾರಿಯಾಗಲಿದ್ದು ಯಾರು ಕೂಡ ರಸ್ತೆಗೆ ಬರುವಂತಿಲ್ಲ, ಅನಗತ್ಯವಾಗಿ ಹೊರ ಬಂದರೆ ವಾಹನಗಳನ್ನ ವಶಕ್ಕೆ ಪಡೆದು ಕೇಸ್ ದಾಖಲಿಸಲಾಗುತ್ತೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಎಚ್ಚರಿಕೆ ನೀಡಿದ್ದಾರೆ.
ಲಾಕ್ಡೌನ್ ಹಿನ್ನಲೆ ಮಾತನಾಡಿದ ಅವರು, ಮೆಡಿಕಲ್ ತುರ್ತು ಸೇವೆಗೆ ೧೦೦ ಗೆ ಕರೆ ಮಾಡಿದರೇ ಪೊಲೀಸರು ಬಂದು ತೊಂದರೆಗೆ ಒಳಗಾದವರಿಗೆ ಸಹಾಯ ಮಾಡಲಿದ್ದಾರೆ. ಎಲ್ಲ ಏರಿಯಾಗಳಲ್ಲಿ ಸ್ವಯಂ ಸೇವಕರು ಕೆಲಸ ಮಾಡುತ್ತಿರುತ್ತಾರೆ ಹಾಗಾಗಿ ಜನರು ಯಾವುದೇ ಕಾರಣಕ್ಕೂ ರಸ್ತೆಗೆ ಬರಬಾರದು, ಕುಂಟು ನೆಪ ಹೇಳಿಕೊಂಡು ಆಚೇ ಬಂದರೆ ಅರೆಸ್ಟ್ ಮಾಡುತ್ತೇವೆ ಎಂದಿದ್ದಾರೆ.
ಸ್ವಿಗ್ಗಿ, ಜುಮೋಟೊ ಟಿ – ಷರ್ಟ್ ಗಳು ದುರ್ಬಳಕೆ ಮಾಡಿಕೊಳ್ಳುವುದು ನಮ್ಮ ಗಮನಕ್ಕೆ ಬಂದಿದೆ, ಹೀಗೆ ದುರ್ಬಳಕೆ ಮಾಡಿಕೊಂಡಿದ್ದ ಕಂಡು ಬಂದರೆ ಅಂತವರನ್ನ ಕೂಡಲೇ ಬಂಧನ ಮಾಡಲಾಗುತ್ತೆ. ಹಾಗಾಗಿ ಜನರು ಎರಡು ದಿನ ಸಹಕಾರ ನೀಡಬೇಕು. ಮದುವೆಗೆ ಅನುಮತಿ ಪಡೆದವರು ೯ ಗಂಟೆಯ ಒಳಗಾಗಿ ಕಲ್ಯಾಣ ಮಂಟಪ ಸೇರಿಕೊಳ್ಳಬೇಕು, ಅನುಮತಿ ಸಿಕ್ಕಿದೇ ಅಂತ ಶನಿವಾರ ಭಾನುವಾರ ಒಡಾಟ ಮಾಡಿದ್ರೆ ಕ್ರಮ ಕೈಗೊಳ್ಳಲಾಗುವುದು ವಾರ್ನಿಂಗ್ ಮಾಡಿದ್ದಾರೆ.