ನವದೆಹಲಿ : ರಾಜ್ಯದಲ್ಲಿ ರೆಮ್‌ಡೆಸಿವಿರ್ ಕೊರತೆ ಹಿನ್ನಲೆ ಹೆಚ್ಚುವರಿಯಾಗಿ 25,000 ಬಾಟಲ್‌ಗಳನ್ನು ಪೂರೈಕೆ ಮಾಡಲು ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದ್ದು, ರಾಜ್ಯಕ್ಕೆ ಎಪ್ರೀಲ್ 30 ರೊಳಗೆ ಒಟ್ಟು 50,000 ರೆಮ್‌ಡೆಸಿವಿರ್ ವಯಲ್ಸ್ ಪೂರೈಕೆಯಾಗಲಿದೆ.
Reviewed situation of availability of #Remdesivir in State of Karnataka upon request of State Govt. It has been decided that an additional allocation of 25000 vials will be made over an above allocation made for Karnataka upto April 30, 2021.@PIBBengaluru @BSYBJP @mla_sudhakar
— Sadananda Gowda (@DVSadanandGowda) April 22, 2021
ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ ಸದಾನಂದಗೌಡ ಬಗ್ಗೆ ಟ್ವಿಟರ್‌ನಲ್ಲಿ ಮಾಹಿತಿ ನೀಡಿದ್ದು, ರಾಜ್ಯ ಸರ್ಕಾರದ ಮನವಿ ಹಿನ್ನಲೆ 25,000 ವಯಲ್ಸ್ ರೆಮ್‌ಡೆಸಿವಿರ್ ಹೆಚ್ಚುವರಿಯಾಗಿ ನೀಡಲು ಆದೇಶಿಸಿದೆ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದ್ದು ರೆಮ್‌ಡೆಸಿವಿರ್ ಮತ್ತು ಆಕ್ಸಿಜನ್ ಕೊರತೆ ಹೆಚ್ಚಾಗಿದೆ. ಕೊರತೆ ಹಿನ್ನಲೆ ರಾಜ್ಯ ಸರ್ಕಾರ ಆಕ್ಸಿಜನ್ ಮತ್ತು ರೆಮ್‌ಡೆಸಿವಿರ್‌ಗಾಗಿ ಬೇಡಿಕೆ ಇಟ್ಟಿತ್ತು.