ಮುಂಬೈ: ಬಾಲಿವುಡ್ ಬಾಯಿಜಾನ್ ಸಲ್ಮಾನ್ ಖಾನ್ ಅಭಿನಯದ ರಾಧೆ ಚಿತ್ರದ ಟ್ರೈಲರ್ ಔಟ್ ಆಗಿದ್ದು, ಯೂಟ್ಯೂಬ್ ನಲ್ಲಿ ದಾಖಲೆಗಳನ್ನ ಪುಡಿ ಮಾಡುವ ಮಾರ್ಗದಲ್ಲಿ ಸಾಗುತ್ತಿದೆ. ರಾಧೆಗಾಗಿ ಸಲ್ಮಾನ್ ಖಾನ್ ಮೊದಲ ಬಾರಿಗೆ ತಮ್ಮ ಹಳೆಯ ಮಾತು ಮುರಿದಿದ್ದಾರೆ. ಫಸ್ಟ್ ಟೈಂ ನಟಿಯ ತುಟಿಗೆ ತುಟಿ ಸೇರಿಸಿದ್ದಾರೆ.

ರಾಧೆ: ಯುವರ್ ಮೋಸ್ಟ್ ವಾಂಟೆಡ್ ಭಾಯ್ ಧಮಾಕಾ ಆ್ಯಕ್ಷನ್ ಸೀನ್ ಗಳಲ್ಲಿ ಸಲ್ಮಾನ್ ಅಬ್ಬರಿಸಿದ್ದಾರೆ. ಆ್ಯಕ್ಷನ್ ಸೀನ್ ಜೊತೆ ದಿಶಾ ಪಟಾಣಿ ಜೊತೆ ಫ್ಲರ್ಟ್ ಮಾಡುತ್ತಾ ಲವರ್ ಬಾಯ್ ಶೇಡ್ ನಲ್ಲಿ ಅಭಿಮಾನಿಗಳ ರಂಜಿಸುವ ಸುಳಿವನ್ನ ಟ್ರೈಲರ್ ಮೂಲಕ ನೀಡಿದ್ದಾರೆ.

ಈ ಹಿಂದೆ ಸಿನಿಮಾಗಳಲ್ಲಿ ತುಟಿಗೆ ತುಟಿ ಸೇರಿಸಲ್ಲ ಅಂತ ಸಲ್ಮಾನ್ ಹೇಳಿದ್ದರು. ರಾಧೆಯಲ್ಲಿ ಆಡಿರುವ ಮಾತಿನಿಂದ ಹಿಂದೆ ಸರಿದಿರುವ ಸಲ್ಮಾನ್ ಲಿಪ್ ಟು ಲಿಪ್ ಕಿಸ್ ನೀಡಿ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಸದ್ಯ ಸಲ್ಮಾನ್ ಕಿಸ್ಸಿಂಗ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಭಾರತ್ ಸಿನಿಮಾದಲ್ಲಿ ದಿಶಾ ಮತ್ತು ಸಲ್ಮಾನ್ ಮೊದಲ ಬಾರಿಗೆ ಜೊತೆಯಾಗಿದ್ದರು. ಭಾರತ್ ಚಿತ್ರದಲ್ಲಿಯೂ ಸಲ್ಮಾನ್ ದಿಶಾಗೆ ಕಿಸ್ ನೀಡಿದ್ದರು. ತದನಂತರ ಸಲ್ಮಾನ್ ಕಿಸ್ ಕುರಿತು ತಮ್ಮದೇ ಆದ ಸ್ಪಷ್ಟನೆ ನೀಡಿದ್ದರು.
ಕಿಸ್ ಮಾಡಲ್ಲ ಅಂತ ಹೇಳಿದ್ಯಾಕೆ?: ಕಪಿಲ್ ಶರ್ಮಾ ಶೋದಲ್ಲಿ ಭಾಗಿಯಾಗಿದ್ದ ವೇಳೆ ಸಲ್ಮಾನ್ ಖಾನ್ ಚಿತ್ರ ಕಿಸ್ ಏಕೆ ಮಾಡಲ್ಲ ಅಂತ ಹೇಳಿದ್ದರು. ಮನೆಯಲ್ಲಿ ಕುಟುಂಬಸ್ಥರ ಜೊತೆ ಇಂಗ್ಲಿಷ್ ಸಿನಿಮಾ ನೋಡುವಾಗ ಕಿಸ್ಸಿಂಗ್ ಸೀನ್ ಬಂದಾಗ ಒಂದು ರೀತಿಯ ಮುಜುಗರ ಉಂಟಾಗುತ್ತದೆ. ಹಾಗಾಗಿ ನನ್ನ ಸಿನಿಮಾ ನೋಡುವಾಗ ಯಾರಿಗೂ ಈ ಮುಜುಗುರ ಉಂಟಾಗಬಾರದು ಅನ್ನೋದು ನನ್ನ ಅನಿಸಿಕೆ ಅಂತ ಹೇಳಿದ್ದರು.