- ಮೆರವಣಿಗೆಯಲ್ಲಿ ‘ಗೋ ಕೊರೊನಾ ಗೋ’ ಘೋಷಣೆ
ಭೋಪಾಲ್: ಮಹಾಮಾರಿ ಕೊರೊನಾ ಓಡಿಸಲು ಮಧ್ಯಪ್ರದೇಶದ ಗ್ರಾಮವೊಂದರಲ್ಲಿ ಮಧ್ಯರಾತ್ರಿ ಪಂಜಿನ ಮೆರವಣಿಗೆ ನಡೆಸಲಾಗಿದೆ. ಸದ್ಯ ಮೆರವಣಿಗೆಯ ಫೋಟೋ, ವಿಡಿಯೋ ಸೋಶೀಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.

ಮಧ್ಯಪ್ರದೇಶದ ಅಗರಾಮಲ್ವಾ ಜಿಲ್ಲೆಯ ಗಣೇಶಪುರದಲ್ಲಿ ಬುಧವಾರ ರಾತ್ರಿ 11 ಗಂಟೆಗೆ ಪಂಜಿನ ಮೆರವಣಿಗೆ ನಡೆಸಲಾಗಿದೆ. ಈ ಮೆರವಣಿಗೆಯಲ್ಲಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ರು. ಗ್ರಾಮದ ಹಿರಿಯರು ಹೇಳಿದ ಹಾಗೆ ಪಂಜಿನ ಮೆರವಣಿಗೆ ನಡೆಸಲಾಯ್ತು ಅಂತ ಯುವಕರು ಸ್ಪಷ್ಟನೆ ನೀಡಿದ್ದಾರೆ.

ಏನಿದು ನಂಬಿಕೆ?: ರಾತ್ರಿ 11 ಗಂಟೆಗೆ ಗ್ರಾಮದ ಪ್ರತಿಯೊಂದು ಮನೆಯಿಂದ ಒಬ್ಬರು ಬೆಂಕಿಯ ಪಂಜು ಹಿಡಿದಕೊಂಡು ಹೊರ ಬರಬೇಕು. ಎಲ್ಲರೂ ಗ್ರಾಮದ ಹೊರಗೆ ಹೋಗಿ ಒಂದೆಡೆ ಪಂಜುಗಳನ್ನ ಎಸೆಯೋದರಿಂದ ಗ್ರಾಮದಲ್ಲಿ ಯಾವುದೇ ಪ್ರಾಕೃತಿಕ ವಿಕೋಪ ಮತ್ತು ಸಾಂಕ್ರಾಮಿಕ ರೋಗಗಳು ಬರಲ್ಲ ಎಂದು ಗಣೇಶಪುರದ ಹಿರಿಯರ ನಂಬಿಕೆ.

ಇದೀಗ ಕೊರೊನಾ ನಿಯಂತ್ರಣಕ್ಕಾಗಿ ಗ್ರಾಮಸ್ಥರೆಲ್ಲ ಸೇರಿ ಪಂಕಜಿನ ಮೆರವಣಿಗೆ ನಡೆಸಿದ್ದಾರೆ. ಮೆರವಣಿಗೆ ಉದ್ದಕ್ಕೂ ‘ಹೋಗು ಕೊರೊನಾ ಹೋಗು’, ‘ಗೋ ಕೊರೊನಾ ಗೋ’ ಎಂದು ಘೋಷಣೆಗಳನ್ನ ಕೂಗಲಾಗಿದೆ.
2020ರಲ್ಲಿ ಪ್ರಧಾನಿಗಳು ಕೊರೊನಾ ಜಾಗೃತಿಗಾಗಿ ತಮಟೆ ಬಾರಿಸುವಂತೆ ಕರೆ ನೀಡಿದ್ದರು. ನಂತರ ರಾತ್ರಿ 9 ಗಂಟೆ 9 ನಿಮಿಷಕ್ಕೆ ಸರಿಯಾಗಿ ಮನೆಯ ವಿದ್ಯುತ್ ದೀಪಗಳನ್ನ ಬೆಳಗಿಸುವಂತೆ ಹೇಳಿದ್ದರು.