ನವದೆಹಲಿ : ಮುಕ್ತ ಮಾರುಕಟ್ಟೆಯಲ್ಲಿ ವ್ಯಾಕ್ಸಿನ್ ಮಾರಾಟಕ್ಕೆ ಕೇಂದ್ರ ಸರ್ಕಾರ ಅವಕಾಶ ನೀಡಿದ ಬೆನ್ನಲೆ ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆ ತನ್ನ ಕೋವಿಶೀಲ್ಡ್ ವ್ಯಾಕ್ಸಿನ್‌ಗೆ ಬೆಲೆ ನಿಗಧಿ ಮಾಡಿದೆ.

ರಾಜ್ಯ ಸರ್ಕಾರಗಳಿಗೆ ಪ್ರತಿ ಡೋಸ್‌ಗೆ 400 ರೂ., ಖಾಸಗಿ ಆಸ್ಪತ್ರೆಗಳಿಗೆ ಪ್ರತಿ ಡೋಸ್‌ಗೆ 600 ರೂ.ರಂತೆ ಬೆಲೆ ನಿಗಧಿ ಮಾಡಿದ್ದು ಮೇ 1 ರ ಬಳಿಕ ಮುಕ್ತ ಮಾರುಕಟ್ಟೆಯಲ್ಲಿ ವ್ಯಾಕ್ಸಿನ್ ಮಾರಾಟವಾಗಲಿದೆ.
ಮೂರನೇ ಹಂತದಲ್ಲಿ ವ್ಯಾಕ್ಸಿನೇಷನ್ ಕಾರ್ಯ ಆರಂಭಿಸಲಿರುವ ಕೇಂದ್ರ ಸರ್ಕಾರ, ಕೊರೊನಾ ಸೋಂಕು ಹೆಚ್ಚಳ ಹಿನ್ನಲೆಯಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ವ್ಯಾಕ್ಸಿನ್ ನೀಡಲು ತಿರ್ಮಾನಿಸಿತ್ತು.

ವ್ಯಾಕ್ಸಿನ್ ಕೊರತೆ ಸೃಷ್ಟಿಯಾಗಿದಿರಲು ಮುಕ್ತ ಮಾರುಕಟ್ಟೆಯಲ್ಲಿ ವ್ಯಾಕ್ಸಿನ್ ಮಾರಾಟಕ್ಕೆ ಕಲ್ಪಿಸಿದ್ದ ಕೇಂದ್ರ, ರಾಜ್ಯ ಸರ್ಕಾರಗಳು ವ್ಯಾಕ್ಸಿನ್ ಉತ್ಪಾದನಾ ಸಂಸ್ಥೆಗಳಿಂದ ನೇರ ಲಸಿಕೆ ಖರೀದಿ ಮಾಡಬಹುದು ಎಂದು ಸೂಚಿಸಿತ್ತು.
IMPORTANT ANNOUNCEMENT pic.twitter.com/bTsMs8AKth
— SerumInstituteIndia (@SerumInstIndia) April 21, 2021
ಕೇಂದ್ರ ಸರ್ಕಾರ ಸೂಚನೆ ಹಿನ್ನಲೆಯಲ್ಲಿ ಆರೋಗ್ಯ ಇಲಾಖೆ ಜೊತೆಗೆ ಸಭೆ ನಡೆಸಿ ಸೆರಮ್ ಬೆಲೆ ನಿಗಧಿ ಮಾಡಿದ್ದು, ಮೇ ಮೊದಲ ವಾರದಲ್ಲಿ ರಷ್ಯಾದಿಂದ ಆಮದಾಗಲಿರುವ ಸ್ಪುಟ್ನಿಕ್ ವಿ ಲಸಿಕೆಗೆ 750 ರೂ ಬೆಲೆ ನಿಗಧಿಯಾಗುವ ಸಾಧ್ಯತೆಗಳಿದೆ.