ಬೆಂಗಳೂರು : ರಾಜ್ಯದಲ್ಲಿ ಸೃಷ್ಟಿಯಾಗಿರುವ ವೈದ್ಯಕೀಯ ಆಕ್ಸಿಜನ್ ಮತ್ತು ರೆಮ್ಡೆಸಿವಿರ್ ಚುಚ್ಚುಮದ್ದು ಕೊರತೆ ನೀಗಿಸಲು ಆರೋಗ್ಯ ಇಲಾಖೆ ಮುಂದಾಗಿದ್ದು ಇದಕ್ಕಾಗಿ ವಾರ್ ರೂಂ ಸ್ಥಾಪಿಸಿ, ಅಧಿಕಾರಿಗಳನ್ನು ನೇಮಿಸಿದೆ.
ಈ ಬಗ್ಗೆ ಟ್ವಿಟರ್ ನಲ್ಲಿ ಮಾಹಿತಿ ನೀಡಿರುವ ಆರೋಗ್ಯ ಸಚಿವ ಡಾ.ಕೆ ಸುಧಾಕರ್, ಆಕ್ಸಿಜನ್ ಮತ್ತು ರೆಮಿಡಿಸಿವಿರ್ ಪೂರೈಕೆಗೆ ಸಿಬ್ಬಂದಿಗಳು 3 ಪಾಳಿಗಳಲ್ಲಿ ಕಾರ್ಯನಿರ್ವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
In order to ensure timely & sufficient supply of Oxygen and #Remdesivir a 24/7 war room has been established with staff working round the clock in 3 shifts.
— Dr Sudhakar K (@mla_sudhakar) April 21, 2021
ಆಕ್ಸಿಜನ್ ಮತ್ತು ರೆಮಿಡಿಸಿವಿರ್ ಪೂರೈಕೆಗೆ 24/7 ವಾರ್ ರೂಮ್ ಸ್ಥಾಪಿಸಲಾಗಿದ್ದು, ಸಿಬ್ಬಂದಿಗಳು 3 ಪಾಳಿಗಳಲ್ಲಿ ಕಾರ್ಯನಿರ್ವಹಿಸಲಿದ್ದಾರೆ. pic.twitter.com/cwnfytDEwk
ರಾಜ್ಯದಲ್ಲಿ ಕಳೆದೊಂದು ವಾರದಿಂದ ವೈದ್ಯಕೀಯ ಆಕ್ಸಿಜನ್ ಮತ್ತು ರೆಮ್ಡೆಸಿವಿರ್ ಇಂಜೆಕ್ಷನ್ ಕೊರತೆ ಸೃಷ್ಟಿಯಾಗಿತ್ತು. ರಾಜ್ಯದ ಹಲವು ಕಡೆ ಸೂಕ್ತ ಸಮಯದಲ್ಲಿ ಈ ಸಾಮಾಗ್ರಿಗಳು ಸಿಗದೇ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿತ್ತು.
ಸದ್ಯ ಕೇಂದ್ರದ ಸಹಕಾರದಲ್ಲಿ ಹೆಚ್ಚುವರಿ ಆಕ್ಸಿಜನ್ ಮತ್ತು ರೆಮ್ಡೆಸಿವಿರ್ ವ್ಯವಸ್ಥೆ ಮಾಡಿಕೊಂಡಿರುವ ರಾಜ್ಯ ಸರ್ಕಾರ ಯಾವುದೇ ತೊಡಕುಗಳಿಲ್ಲ ರಾಜ್ಯದಲ್ಲಿ ಹಂಚಿಕೆಗೆ ಸಿದ್ದವಾಗಿದೆ. ತುರ್ತು ಬೇಡಿಕೆಗಳಿದ್ದಲ್ಲಿ ವಾರ್ ರೂಂ ಗೆ ಕರೆ ಮಾಡಿ ರೆಮ್ಡೆಸಿವಿರ್ ಮತ್ತು ಆಕ್ಸಿಜನ್ ಗಾಗಿ ಮನವಿ ಮಾಡಬಹುದಾಗಿದೆ.