ನವದೆಹಲಿ : ಭಾರತದಲ್ಲಿ ರೂಪಾಂತರಿ ವೈರಸ್ ಕಾಟ ಮುಂದುವರಿದಿದ್ದು, ಕೊರೊನಾ ಸೋಂಕಿನಿಂದ ಭಾರತಕ್ಕೆ ಸದ್ಯಕ್ಕಿಲ್ಲ ಮುಕ್ತಿ ಸಿಗುವ ಯಾವ ಲಕ್ಷಣಗಳು ಕಂಡು ಬರುತ್ತಿಲ್ಲ. ಭಾರತದಲ್ಲಿ ಡಬಲ್ ಬಳಿಕ ತ್ರಿಬಲ್ ರೂಪಾಂತರಿ ವೈರಸ್ ಪತ್ತೆಯಾಗಿದೆ ಎಂದು ತಜ್ಞರು ಹೇಳಿದ್ದಾರೆ.
ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಮತ್ತು ನವದೆಹಲಿಯಲ್ಲಿ ಕೊರೊನಾ ವೈರಸ್ ನ ಹೊಸ ಪ್ರಬೇಧ ಪತ್ತೆಯಾಗಿದ್ದು ಇದು ಮೂರು ವೈರಸ್‌ಗಳ ಪರಿಣಾಮದಿಂದ ಹೊರ ಹೊಮ್ಮಿರುವ ಹೊಸ ರೂಪಾಂತರಿ ವೈರಸ್ ಎಂದು ಖಚಿತಪಡಿಸಿದ್ದಾರೆ.

ಸದ್ಯ ಮೂರು ರಾಜ್ಯಗಳಲ್ಲಿ ಪತ್ತೆಯಾಗಿರುವ ಈ ವೈರಸ್ ದೇಶದಲ್ಲಿ ಅತಿ ಹೆಚ್ಚು ಕೊರೊನಾ ಸೋಂಕು ಹರಡಲು ಕಾರಣವಾಗಿದೆ ಎಂದು ತಜ್ಞರು ತಿಳಿಸಿದ್ದಾರೆ. ಮಹಾರಾಷ್ಟ್ರ, ದೆಹಲಿ ಮತ್ತು ಬಂಗಾಳದ ಸೋಂಕಿತರ ಜೀನೋಮ್ ಟೆಸ್ಟ್ ನಡೆಸಿದಾಗ ಈ ಆತಂಕಕಾರಿ ಮಾಹಿತಿ ಗೊತ್ತಾಗಿದೆ.
ಭಾರತ ಇದಕ್ಕೂ ಮುನ್ನ ಎರಡು ವೈರಸ್‌ನಿಂದ ರೂಪಾಂತರಗೊಂಡ ಹೊಸ ತಳಿಯ ಪರಿಣಾಮವನ್ನು ನೋಡಿತ್ತು. ಇದು ನಿಯಂತ್ರಣಕ್ಕೆ ಬರುವ ಮುನ್ನವೇ ಹಲವರಲ್ಲಿ ಈಗ ಮೂರು ವೈರಸ್ ನಿಂದ ರೂಪಾಂತರಿ ವೈರಸ್ ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.