ನವದೆಹಲಿ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೇ 1ರಿಂದ ಮೂರನೇ ಹಂತದಲ್ಲಿ ವ್ಯಾಕ್ಸಿನೇಷನ್ ಘೋಷಿಸಿದ್ದು, ಇದರಲ್ಲಿ ತಾರತಮ್ಯ ಮಾಡಲಾಗಿದೆ ಎಂದು ಕಾಂಗ್ರೆಸ್ ಮುಖಂಡ, ಸಂಸದ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಟ್ವಿಟ್ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, ಎರಡು ಹಂತಗಳಲ್ಲಿ ಕೇಂದ್ರ ಸರ್ಕಾರ ಉಚಿತ ಲಸಿಕೆ ನೀಡಿತ್ತು, ಆದರೆ ಮೂರನೇ ಹಂತದಲ್ಲಿ 18-45 ವರ್ಷದವರಿಗೆ ಉಚಿತವಾಗಿ ವ್ಯಾಕ್ಸಿನ್ ನೀಡುತ್ತಿಲ್ಲ ಎಂದರು
• No free vaccines for 18-45 yr olds.
— Rahul Gandhi (@RahulGandhi) April 20, 2021
• Middlemen brought in without price controls.
• No vaccine guarantee for weaker sections.
GOI’s Vaccine Discrimination- Not Distribution- Strategy!
ವ್ಯಾಕ್ಸಿನ್ ನೀಡಲು ಖಾಸಗಿ ವಲಯಕ್ಕೂ ಅವಕಾಶ ನೀಡಿದ್ದು, ಮಧ್ಯವರ್ತಿಗಳಿಗೆ ಬೆಲೆ ನಿಯಂತ್ರಣವಿಲ್ಲದೇ ವ್ಯಾಕ್ಸಿನ್ ಮಾರಾಟಕ್ಕೆ ಅವಕಾಶ ನೀಡಿದಂತಾಗಿದೆ. ವ್ಯಾಕ್ಸಿನ್ ಖಾಸಗಿ ಮಾರುಕಟ್ಟೆಯಲ್ಲಿ ಮುಕ್ತವಾಗುವುದರಿಂದ ದುರ್ಬಲ ವರ್ಗದ ಜನರಗೆ ವ್ಯಾಕ್ಸಿನ್ ಸಿಗುವ ಗ್ಯಾರಂಟಿ ಇಲ್ಲ, ಇದು ಕೇಂದ್ರ ಸರ್ಕಾರದ ಲಸಿಕೆ ತಾರತಮ್ಯ ನೀತಿ ಎಂದು ವಾಗ್ದಾಳಿ ನಡೆಸಿದ್ದಾರೆ.