ಬೆಂಗಳೂರು : ತೀವ್ರಗತಿಯಲ್ಲಿ ಏರುತ್ತಿರುವ ಕೊರೊನಾ ವೈರಸ್ ಇಂದೂ ಕರ್ನಾಟಕಕ್ಕೆ ಶಾಕ್ ಕೊಟ್ಟಿದೆ. ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ 21,794 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, 149 ಮಂದಿ ಸಾವನ್ನಪ್ಪಿದ್ದಾರೆ.

ಬೆಂಗಳೂರಿನಲ್ಲಿ ದಾಖಲೆ ಪ್ರಮಾಣದಲ್ಲಿ ಸೋಂಕು ಪತ್ತೆಯಾಗಿದ್ದು 13,782 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು 92 ಮಂದಿ ಸಾವನ್ನಪ್ಪಿದ್ದಾರೆ. ಇನ್ನು ಬೆಂಗಳೂರು ಬಳಿಕ ತುಮಕೂರಿನಲ್ಲಿ ಕೊರೊನಾ ಸ್ಫೋಟವಾಗಿದ್ದು 1,055 ಮಂದಿ ಸೋಂಕಿಗೆ ತುತ್ತಾಗಿದ್ದು ನಾಲ್ವರು ಮೃತರಾಗಿದ್ದಾರೆ.

ಸದ್ಯ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 11,98,644ಕ್ಕೆ ಏರಿದ್ದು 1,59,158 ಸಕ್ರಿಯ ಪ್ರಕರಣಗಳಿದೆ. ಈವರೆಗೂ ರಾಜ್ಯದಲ್ಲಿ 13,646 ಮಂದಿ ಸಾವನ್ನಪ್ಪಿದ್ದರಾಜ್ಯದಲ್ಲೊ 751 ಮಂದಿ ಐಸಿಯು ಘಟಕದಲ್ಲಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದು ಸೋಂಕಿನ ಪ್ರಮಾಣ 14.77% ಏರಿಕೆಯಾಗಿದ್ದು ಸಾವಿನ ಪ್ರಮಾಣಪ್ರಮಾಣ 0.68% ರಷ್ಟಿದೆ