ಕೇಂದ್ರ ಸರ್ಕಾರವು ಮೇ 1 ರಿಂದ ಮೂರನೇ ಹಂತದ ವ್ಯಾಕ್ಸಿನೇಷನ್ ಜಾರಿ ಮಾಡಿದೆ. ಕೊರೊನಾ ಸೋಂಕು ತೀವ್ರಗತಿಯಲ್ಲಿ ಏರಿಕೆಯಾಗುತ್ತಿರುವುದರಿಂದ 18 ವರ್ಷ ಮೇಲ್ಪಟ್ಟ ಎಲ್ಲರೂ ವ್ಯಾಕ್ಸಿನ್ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ವ್ಯಾಕ್ಸಿನ್ ಕೊರತೆಯ ಚರ್ಚೆ ನಡುವೆಯೂ ಲಸಿಕೆ ಕುರಿತು ಕೆಲ ಬದಲಾವಣೆ ಮಾಡಿದೆ. 50% ವ್ಯಾಕ್ಸಿನ್ ಕೇಂದ್ರ ಸರ್ಕಾರ ರಾಜ್ಯಗಳಿಗೆ ನೀಡಲಿದ್ದು, ಇನ್ನುಳಿದ 50% ರಷ್ಟು ಹೊರ ದೇಶಗಳಿಂದ ವ್ಯಾಕ್ಸಿನ್ ತರಿಸಿಕೊಳ್ಳಬಹುದು ಎಂದು ತಿಳಿಸಿದೆ. ಅಲ್ಲದೆ, ರಾಜ್ಯಗಳು ಖಾಸಗಿ ವ್ಯಾಕ್ಸಿನ್ ಉತ್ಪಾದಕ ಕಂಪನಿಗಳಿಂದ ನೇರವಾಗಿ ವ್ಯಾಕ್ಸಿನ್ ಖರೀದಿ ಮಾಡಬಹುದು ಎಂದು ತಿಳಿಸಿದೆ.

ವಿದೇಶಗಳಲ್ಲಿ ಬಳಕೆಗೆ ಸಿದ್ದವಾಗಿರುವ ಪ್ರಮಾಣೀಕೃತ ವ್ಯಾಕ್ಸಿನ್ ಆಮದು ಮಾಡಿಕೊಳ್ಳಬಹುದು. ಆದರೆ, ಪ್ರಯೋಗದ ಹಂತದಲ್ಲಿರುವ ವ್ಯಾಕ್ಸಿನ್ ಬಳಕೆ ಮಾಡುವಂತಿಲ್ಲ ಎಂದು ತಿಳಿಸಿದೆ. ಖಾಸಗಿ ಆಸ್ಪತ್ರೆಗಳೂ ವ್ಯಾಕ್ಸಿನ್ ತರಿಸಿಕೊಳ್ಳಲು ಅವಕಾಶ ನೀಡಲಾಗಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ ಬೆಲೆಗಳು ಪಾರದರ್ಶಕವಾಗಿರಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿದೆ.