ನವದೆಹಲಿ : ದೇಶದಲ್ಲಿ ಡೆಡ್ಲಿ ವೈರಸ್ ಕೊರೊನಾ ಅಬ್ಬರ ಮುಂದುವರಿದಿದ್ದು ಇಂದು ಕೂಡಾ ಹೊಸ ದಾಖಲೆ ಬರೆದಿದೆ. ಕಳೆದ 24 ಗಂಟೆಯಲ್ಲಿ 2,73,810 ಮಂದಿಯಲ್ಲಿ ಸೋಂಕು ಕಾಣಿಸಿಕೊಳ್ಳುವ ಮೂಲಕ ಭಾರತೀಯರಿಗೆ ಕಿಲ್ಲರ್ ವೈರಸ್ ಶಾಕ್ ಕೊಟ್ಟಿದೆ.
ಕೊರೋನಾ ಪೀಡಿತರ ಸಂಖ್ಯೆ ದೇಶದಲ್ಲಿ 1,50,61,919ಕ್ಕೆ ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 1,44,178 ಗುಣಮುಖರಾಗಿದ್ದಾರೆ. ಸದ್ಯ 19,29,329 ಸಕ್ರಿಯ ಪ್ರಕರಣಗಳಿದೆ.
India reports 2,73,810 new #COVID19 cases, 1,619 fatalities and 1,44,178 discharges in the last 24 hours, as per Union Health Ministry
— ANI (@ANI) April 19, 2021
Total cases: 1,50,61,919
Active cases: 19,29,329
Total recoveries: 1,29,53,821
Death toll: 1,78,769
Total vaccination: 12,38,52,566 pic.twitter.com/gseG8on7Oe
ಕಳೆದ 24 ಗಂಟೆಯಲ್ಲಿ ಕೊರೋನಾಗೆ 1,619 ಜನ ಬಲಿಯಾಗಿದ್ದು, ದೇಶದಲ್ಲಿ ಈವರೆಗೆ ಕೊರೋನಾಗೆ 1,78,769 ಜನ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆಯಿಂದ ಮಾಹಿತಿ ನೀಡಿದೆ.
ಭಾರತದಲ್ಲಿ ಕೊರೊನಾ ಹೆಚ್ಚಳವಾಗುತ್ತಿರುವ ಹಿನ್ನೆಲೆ ವಿಶ್ವ ಆರೋಗ್ಯ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ. ದೇಶದಲ್ಲಿ ಕಳೆದ ವಾರ 5.2 ಮಿಲಿಯನ್ ಜನರಿಗೆ ಸೋಂಕು ಕಂಡು ಬಂದಿದ್ದು ಇದು ವಾರದಲ್ಲಿ ಅತಿಹೆಚ್ಚು ಕೇಸ್ ಕಂಡುಬಂದ ದಾಖಲೆ ಸೃಷ್ಟಿಸಿದ್ದು ಇದು ಆತಂಕದ ಬೆಳವಣಿಗೆ ಎಂದಿದೆ.