ಚೆನ್ನೈ: ಈ ಸೀಸನ್ ನ ಮೊದಲ ವಿಕೆಟ್ ಪಡೆಯುತ್ತಿದ್ದಂತೆ ಚಹಲ್ ಪತ್ನಿ ಧನುಶ್ರೀ ಭಾವುಕರಾಗಿ ಕಣ್ಣೀರಿಟ್ಟುರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಈ ಹಿಂದೆ ಆಡಿದ ಎರಡು ಪಂದ್ಯಗಳಲ್ಲಿ ಚಹಲ್ ಯಾವುದೇ ವಿಕೆಟ್ ಪಡೆದಿರಲಿಲ್ಲ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಂದು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 38 ರನ್ ಗಳ ಅಂತರದಲ್ಲಿ ಗೆದ್ದು ಬೀಗಿತು. ಈ ಸೀಸನ್ ಮೊದಲ ವಿಕೆಟ್ ಕಬಳಿಸುತ್ತಿದ್ದಂತೆ ಗ್ಯಾಲರಿಯಲ್ಲಿ ನಿಂತಿದ್ದ ಧನುಶ್ರೀ ಭಾವುಕರಾದರು. ಪತಿ ಸಂಭ್ರಮ ಕಂಡು ಧನುಶ್ರೀ ತಮ್ಮ ಕಣ್ಣೀರು ಹಿಡಿದಿಟ್ಟುಕೊಳ್ಳಲು ಸಾಧ್ಯ ಆಗಲಿಲ್ಲ.
Dhanashree's reaction after chahal's first Wicket of #IPL2021 ❤️❣
— 👑 Ishan ¹⁸ 👑 (@INDIANCRIKET_18) April 18, 2021
Shows how much families are attached ❣❣❣❣ pic.twitter.com/CbvWbqNndX
ಮುಂಬೈ ಇಂಡಿಯನ್ಸ್ ವಿರುದ್ಧ ಆಡಿದ ಪಂದ್ಯ ಚಹಲ್ ಅವರಿಗೆ ಐಪಿಎಲ್ ನ ನೂರನೇ ಪಂದ್ಯ ಆಗಿತ್ತು. ಹಾಗಾಗಿ ಚಹಲ್ ಮೇಲೆ ಅಭಿಮಾನಿಗಳು ಹೆಚ್ಚು ನಿರೀಕ್ಷೆ ಇಟ್ಟುಕೊಟ್ಟುಕೊಂಡಿದ್ದರು. ಇಂದು 4 ಓವರ್ ಗಳಲ್ಲಿ 34 ರನ್ ನೀಡಿ 2 ವಿಕೆಟ್ ಪಡೆದರು. ಓಪನರ್ ನಿತೀಶ್ ರಾಣಾ ಮತ್ತು ಪ್ರಮುಖ ಆಟಗಾರ ದಿನೇಶ್ ಕಾರ್ತಿಕ್ ವಿಕೆಟ್ ಕಿತ್ತು ಮೂಲಕ ತಂಡದ ಗೆಲುವಿಗೆ ಕಾರಣರಾದ್ರು.

ಐಪಿಎಲ್ ಸೀಸನ್ 14ರಲ್ಲಿ ಪತಿಗೆ ಬೆಂಬಲ ನೀಡಲು ಧನುಶ್ರೀ ಸ್ಟೇಡಿಯಂ ಗ್ಯಾಲರಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದುವರೆಗೂ 102 ಐಪಿಎಲ್ ಪಂದ್ಯ ಆಡಿರೋ ಚಹಲ್ 123 ವಿಕೆಟ್ ಪಡೆದಿದ್ದಾರೆ. ಚಹಲ್ ಆರ್‍ಸಿಬಿ ತಂಡದ ಪ್ರಮುಖ ಸ್ಪಿನ್ನರ್ ಆಗಿದ್ದಾರೆ.