ನವದೆಹಲಿ: ಜನವರಿ 26ರಂದು ಕೆಂಪು ಕೋಟೆ ಮೇಲೆ ಧಾರ್ಮಿಕ ಧ್ವಜ ಹಾರಿಸಿದ್ದ ನಟ ದೀಪ್ ಸಿಧು ಮತ್ತೆ ಜೈಲು ಸೇರಿದ್ದಾನೆ, ಇಂದು ಬೆಳಗ್ಗೆ ದೆಹಲಿ ನ್ಯಾಯಾಲಯ ಬೆಳಗ್ಗೆ ಷರತ್ತು ಬದ್ಧ ಜಾಮೀನು ನೀಡಿತ್ತು. ಸಂಜೆ ದೆಹಲಿ ಕ್ರೈಂ ಬ್ರ್ಯಾಂಚ್ ಅಧಿಕಾರಿಗಳು ದೀಪು ಸಿಧುನನ್ನ ಬಂಧಿಸಿದ್ದಾರೆ. ಬೆಳಗ್ಗೆ ದೆಹಲಿ ನ್ಯಾಯಾಲಯ ಇಬ್ಬರು ಶ್ಯೂರಿಟಿ ಮತ್ತು 30 ಸಾವಿರ ರೂ. ಬಾಂಡ್ ಅಡಿ ಜಾಮೀನು ನೀಡಿತ್ತು.

ಕೇಂದ್ರದ ಮೂರು ಕೃಷಿ ಕಾನೂನುಗಳನ್ನ ವಿರೋಧಿಸಿ ರೈತರು ಟ್ರ್ಯಾಕ್ಟರ್ ಪರೇಡ್ ಮೂಲಕ ದೆಹಲಿ ಚಲೋ ಮೂಲಕ ಕೆಂಪು ಕೋಟೆಗೆ ಮುತ್ತಿಗೆ ಹಾಕಿದ್ದರು. ಈ ವೇಳೆ ದೀಪ್ ಸಿಧು ಕೆಂಪು ಕೋಟೆಯ ಮೇಲಿನ ಧ್ವಜ ಕಿತ್ತು ಧಾರ್ಮಿಕ ಬಾವುಟ ಹಾಕಿದ್ದನು. ಈ ವೇಳೆ ರೈತರನ್ನ ಪ್ರಚೋದಿಸಿದ ಹಿನ್ನೆಲೆ ಪ್ರತಿಭಟನೆ ಹಿಂಸೆ ರೂಪ ಪಡೆದುಕೊಂಡಿತ್ತು. ಘರ್ಷಣೆ ವೇಳೆ ಫೇಸ್‍ಬುಕ್ ಲೈವ್ ಬಂದಿದ್ದ ದೀಪು ಸಿಧು ಹಲವು ವಿಚಾರಗಳನ್ನ ಹಂಚಿಕೊಂಡಿದ್ದನು. ತದನಂತರ ಫೆಬ್ರವರಿ 9ರಂದು ದೀಪ್ ಸಿಧು ಬಂಧನವಾಗಿತ್ತು.

ದೀಪು ಸಿಧು ಪರವಾಗಿ ವಾದ ಮಂಡಿಸಿದ್ದ ವಕೀಲರು, ಕಕ್ಷಿದಾರ ಯಾವುದೇ ರೈತ ಸಂಘಟನೆಯ ಮುಖಂಡ ಅಥವಾ ಸದಸ್ಯನಲ್ಲ. ಲೈವ್ ವೀಡಿಯೋ ಮಾಡಿದ್ದು ತಪ್ಪು ಅನ್ನೋದನ್ನ ದೀಪ್ ಸಿಧು ಸಹ ಒಪ್ಪಿಕೊಂಡಿದ್ದಾರೆ. ಆದ್ರೆ ಎಲ್ಲ ತಪ್ಪುಗಳು ಅಪರಾಧವಾಗಲಾರದು. ಹಾಗೆ ಪ್ರತಿಭಟನಾ ನಿರತ ರೈತರನ್ನ ಪ್ರಚೋಸಿದ್ದಾರೆ ಅಂತ ಹೇಳಲು ಯಾವುದೇ ಸಾಕ್ಷ್ಯಗಳಿಲ್ಲ ಎಂದು ವಾದ ಮಂಡಿಸಿದ್ದರು. ಇತ್ತ ದೀಪ್ ಸಿಧು ಸಹ ಮಾಧ್ಯಮಗಳು ನನ್ನನ್ನ ಆರೋಪಿ ಸ್ಥಾನದಲ್ಲಿ ನಿಲ್ಲಿಸಿದ್ಯಾಕೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ ಅಂತ ಹೇಳಿದ್ದ.