ದೇಶದ್ಯಾಂತ ಕೊರೊನಾ ಸೋಂಕು ತೀವ್ರಗತಿಯಲ್ಲಿ ಏರಿಕೆಯಾಗುತ್ತಿರುವ ಹಿನ್ನಲೆಯಲ್ಲಿ, ದೇಶದ್ಯಾಂತ ವೈದ್ಯಕೀಯ ಸೌಲಭ್ಯಗಳ ಕೊರತೆ ಸೃಷ್ಟಿಯಾಗಿದೆ. ಹೀಗಾಗಿ, ಕೊರೊನಾ ಪೀಡಿತರಿಗೆ ಯೂತ್ ಕಾಂಗ್ರೆಸ್ ಸೋಶಿಯಲ್ ಮಿಡಿಯಾಗಳಲ್ಲಿ ಸಹಾಯ ಹಸ್ತ ಚಾಚಿದೆ. ಬೆಡ್, ಐಸಿಯು ಬೆಡ್, ಪ್ಲ್ಯಾಸ್ಮಾ, ಆಕ್ಸಿಜನ್, ರೆಮ್ಡೆಸಿವಿರ್ ಒದಗಿಸುವಂತೆ ಜನರು ಯೂತ್ ಕಾಂಗ್ರೆಸ್‌ಗೆ ಮನವಿ ಮಾಡುತ್ತಿದ್ದು, ಯೂತ್ ಕಾಂಗ್ರೆಸ್‌ನ ಕಾರ್ಯಕರ್ತರು ಮನವಿಗೆ ಸ್ಪಂದಿಸಿ ವೈದ್ಯಕೀಯ ಸೌಲಭ್ಯ ದೊರಕಿಸಿಕೊಡುತ್ತಿದ್ದಾರೆ.

ಯೂಥ್ ಕಾಂಗ್ರೆಸ್‌ನಅಧ್ಯಕ್ಷ ಶ್ರೀನಿವಾಸ ಬಿ.ವಿ ನೇತೃತ್ವದಲ್ಲಿ ನೆರವು ನೀಡಲಾಗುತ್ತಿದ್ದು, ದೆಹಲಿಯ ಯೂಥ್ ಕಾಂಗ್ರೆಸ್ ಕಚೇರಿಯಲ್ಲಿ ವಾರ್ ರೂಂ ಸಹ ನಿರ್ಮಾಣ ಮಾಡಲಾಗಿದೆ. ರಾಜ್ಯ ಯೂಥ್ ಕಾಂಗ್ರೆಸ್ ಘಟಕಗಳ ಸಹಕಾರದಲ್ಲಿ ಈವರೆಗೂ ಸುಮಾರು 18 ಸಾವಿರ ಮನವಿಗೆ ಯೂಥ್ ಕಾಂಗ್ರೆಸ್ ಸ್ಪಂದಿಸಿ ಚಿಕಿತ್ಸೆಗೆ ನೆರವು ನೀಡಿದೆ.