ಬೆಂಗಳೂರು : ಕೊರೊನಾ ಸೋಂಕಿಗೆ ತುತ್ತಾಗಿ ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗಿರುವ ಹಾಲಿ ಸಿಎಂ ಬಿ.ಎಸ್ ಯಡಿಯೂರಪ್ಪ ಮತ್ತು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ವೈದ್ಯಕೀಯ ವಿದ್ಯಾರ್ಥಿಗಳು ಸಿಡಿದೆದ್ದಿದ್ದಾರೆ. ಸರ್ಕಾರಿ ಆಸ್ಪತ್ರೆಗಳನ್ನು ಬಿಟ್ಟು ಖಾಸಗಿ ಆಸ್ಪತ್ರೆಗಳಿಗೆ ಅಡ್ಮಿಟ್ ಆಗಿರುವುದಕ್ಕೆ ಆಕ್ರೊಶ ವ್ಯಕ್ತಪಡಿಸಿದ್ದಾರೆ.
ವಿಕ್ಟೋರಿಯಾ ಮತ್ತು ಬೋರಿಂಗ್ ಆಸ್ಪತ್ರೆ ಹೆಸರಿನಲ್ಲಿ ಟ್ವಿಟ್ಟರ್ ಖಾತೆಯನ್ನು ತೆರೆದಿರುವ ವಿದ್ಯಾರ್ಥಿಗಳು ಸಿಎಂ ಮತ್ತು ಮಾಜಿ ಸಿಎಂಗೆ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.
ನಾವು ವೈದ್ಯಕೀಯ ವಿದ್ಯಾರ್ಥಿಗಳು, ನಾವು ನಿಮಗೆ ಚಿಕಿತ್ಸೆ ನೀಡಲು ಉತ್ಸುಕರಾಗಿದ್ದೇವು ಯಾವುದೇ ಯಾವುದೇ ಭತ್ಯೆ ತೆಗೆದುಕೊಳ್ಳದೇ ನಾವು ನಿಮಗೆ ಚಿಕಿತ್ಸೆ ನೀಡುತ್ತಿದ್ದೇವು ಆದರೆ ನೀವೂ ಖಾಸಗಿ ಆಸ್ಪತ್ರೆ ಸೇರಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ. ಸರ್ಕಾರ ಉನ್ನತ ಹುದ್ದೆಯಲ್ಲಿರುವ ನೀವುಗಳು ಹೀಗೆ ಸರ್ಕಾರಿ ವ್ಯವಸ್ಥೆ ಬಿಟ್ಟು ಖಾಸಗಿ ವ್ಯವಸ್ಥೆ ನೆಚ್ಚಿಕೊಂಡರೇ ಜನರು ಸರ್ಕಾರಿ ಆಸ್ಪತ್ರೆಗಳನ್ನು ನಂಬುವುದೇಗೆ ಎಂದು ಕಾರವಾಗಿ ಪ್ರಶ್ನಿಸಿದ್ದಾರೆ.

ಟ್ವಿಟರ್ ಖಾತೆಯಲ್ಲಿ ನಾವು ಮೊದಲು ಬಡವರಿಗೆ ಸೇವೆ ನೀಡುತ್ತಿದ್ದೇವು, ಈಗ ಯಾವುದೇ ಭತ್ಯೆಗಳಿಲ್ಲದೇ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಸೂಚಿಸುತ್ತಿದ್ದಾರೆ. ಸರ್ಕಾರ ವರ್ತನೆ ಕೊರೊನಾ ರಹಿತ ರೋಗಿಗಳು ಸಾಯಲಿ ಬಿಡಿ ಎನ್ನುವಂತಿದೆ ಎಂದು ಉಲ್ಲೇಖಿಸಲಾಗಿದೆ.