ನವದೆಹಲಿ : ವಿವಿಧ ರಾಜ್ಯಗಳಿಗೆ ಕಳೆದ ಐದು ದಿನಗಳಲ್ಲಿ 6.69 ಲಕ್ಷ ಬಾಟಲಿ ರೆಮ್ಡೆಸಿವಿರ್ ಚುಚ್ಚುಮದ್ದನ್ನು ಪೂರೈಸಲಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ ವಿ ಸದಾನಂದ ಗೌಡ ಹೇಳಿದ್ದಾರೆ.
ಔಷಧ ಇಲಾಖೆಯನ್ನೂ ನಿರ್ವಹಿಸುತ್ತಿರುವ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಡಿ.ವಿ ಸದಾನಂದಗೌಡ ಇಂದು ನವದೆಹಲಿಯಲ್ಲಿ ಮಹತ್ವದ ಸಭೆ ನಡೆಸಿದ ಬಳಿಕ ಈ ಮಾಹಿತಿ ನೀಡಿದರು.
ಸಭೆಯಲ್ಲಿ ಕೊರೊನಾ ಔಷಧ ಲಭ್ಯತೆ ಮತ್ತು ಕೊರತೆ ಸಂಬಂಧಿಸಿದಂತೆ ಚರ್ಚೆಗೆ ಸುದೀರ್ಘ ಚರ್ಚೆ ನಡೆಸಿದರು. ಬಳಿಕ ಮಾತನಾಡಿದ ಅವರು ರೆಮ್ಡೆಸಿವರ್ ಕೊರತೆ ಹಿನ್ನಲೆ ರಫ್ತು ನಿಲ್ಲಿಸಿದ್ದು ದೇಶಿಯ ಬಳಿಕೆಗೆ ಉತ್ಪಾದನೆ ಹೆಚ್ಚು ಮಾಡಿದೆ ಸದ್ಯ ಪ್ರತಿ ತಿಂಗಳು 28.63 ಲಕ್ಷ ಬಾಟಲಿ ಉತ್ಪಾದನೆಯಾಗುತ್ತಿತ್ತು ಇದನ್ನು 41 ಲಕ್ಷ ಬಾಟಲಿಗೆ ಏರಿಕೆ ಮಾಡಿದ್ದೇವೆ ಎಂದರು.
ಸರ್ಕಾರದ ಮಧ‍್ಯಪ್ರವೇಶದಿಂದ ರೂ. 5400ಕ್ಕೆ ಮಾರಾಟವಾಗುತ್ತಿದ್ದ ರೆಮ್ಡೆಸಿವಿರ್ ಚುಚ್ಚುಮದ್ದು ಈಗ ರೂ 3500 ಲಭ್ಯವಾಗುತ್ತಿದೆ. ಆಸ್ಪತ್ರೆ ಮತ್ತು ಸಾಂಸ್ಥಿಕ ಮಟ್ಟದ ಬೇಡಿಕೆಯ ಪೂರೈಕೆಯನ್ನು ಈಡೇರಿಸಲು ಆದ್ಯತೆ ನೀಡುವಂತೆ ಉತ್ಪಾದಕರಿಗೆ ಸೂಚಿಸಲಾಗಿದೆ.
ಹಾಗೆಯೇ ರೆಮ್ಡೆಸಿವರ್ ಅಕ್ರಮ ದಾಸ್ತಾನು, ಅಧಿಕ ಬೆಲೆಗೆ ಮಾರಾಟ ಮಾಡುವಂತಹ ಪ್ರಕರಣಗಳು ಕಂಡುಬಂದರೆ ಕಠಿಣ ಕ್ರಮ ಜರುಗಿಸುವಂತೆ ಡಿಸಿಜಿಐ, ಎನ್ಪಿಪಿಐ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಿಯಂತ್ರಣಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವರು ಹೇಳಿದರು.
ದೇಶಿಯವಾಗಿ ಅಭಿವೃದ್ಧಿಪಡಿಸಿರುವ ಕೋವಿಡ್19 ಲಸಿಕೆ ಉತ್ಪಾದನೆ ನಿರೀಕ್ಷಿತ ಮಟ್ಟದಲ್ಲಿ ಮುಂದುವರಿದಿದೆ. ಕೋವಿಡ್ ಲಸಿಕಾ ಅಭಿಯಾನಕ್ಕೆ ಇನ್ನಷ್ಟು ವೇಗ ನೀಡಲು ರಷ್ಯಾದಿಂದ ಸ್ಪುಟ್ನಿಕ್-5 ಲಸಿಕೆಯನ್ನು ಆಮದು ಮಾಡಿಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.
Total 6.69 lacs vials of #Remdesivir have been made available to different States/UTs of the country during the last 5 days.
— Sadananda Gowda (@DVSadanandGowda) April 16, 2021
The supply has been ramped up in the most effective states.
On Govt’s intervention, major Manufacturers of #Remdesivir have voluntarily reduced its MRP ranging from Rs 5400 to less than Rs 3500 by 15.04.2021.
— Sadananda Gowda (@DVSadanandGowda) April 16, 2021
This will support PM @narendramodi's efforts to fight #COVID19.